ಮೋಲ್ 1 -

ರಸಾಯನವಿಜ್ಞಾನದಲ್ಲಿ ಕಂಡುಬರುವ ಪರಿಮಾಣ ಪರಿಕಲ್ಪನೆ. ಮೆಟ್ರಿಕ್ ಮಾಪನ ವ್ಯವಸ್ಥೆಯಲ್ಲಿಯ ಏಳು ಏಕಮಾನಗಳ ಪೈಕಿ ಒಂದು.  ವಸ್ತುವಿನ ಸಾಪೇಕ್ಷ ಅಣವಿಕರಾಶಿಗೆ (ರಿಲೆಟಿವ್  ಮಾಲಿಕ್ಯುಲರ್ ಮಾಸ್) ಸಂಖ್ಯಾತ್ಮಕವಾಗಿ ಸಮನಾಗಿರುವ (ಗ್ರಾಮ್‍ಗಳಲ್ಲಿ) ರಾಶಿಯನ್ನು ಒಂದು ಮೋಲ್ ಎಂದು ಕರೆಯುವುದಿದೆ.  ಇದರ ಅರ್ಥ ಇಷ್ಟು : ಕಾರ್ಬನ್  12 ಸಮಸ್ಥಾನಿಯ 0.012 ಕಿಲೋಗ್ರಾಮ್ ತೂಕದಲ್ಲಿ ಇರುವ ಪರಮಾಣುಗಳಷ್ಟೇ ಸಂಖ್ಯೆಯ ಅಣುಗಳನ್ನು ಹೊಂದಿರುವ ಮೊತ್ತವೇ ಒಂದು ಮೋಲ್ ಎನಿಸುತ್ತದೆ.  ಇದು 6.022 ( 1023  ಎಂಬ ಸಂಖ್ಯೆಗೆ ಸಮ.  ಈ ಸಂಖ್ಯೆಗೆ ಅವೊಗ್ಯಾಡ್ರೋ ಸಂಖ್ಯೆ (ಓ0) ಎಂದು ಹೆಸರು.  ಮೋಲ್ ಎಂಬುದು ರಾಶಿಯ ಸ್ವತಂತ್ರ ಏಕಮಾನ.  ಅಂದರೆ, ಅದು ಒಂದು ದತ್ತ ವಾಸ್ತುವಿಗೆ ಸಂಬಂಧಿಸಿದ್ದು.  ( ಎಂಬುದು ಸಾಪೇಕ್ಷ ಅಣವಿಕರಾಶಿ ಆದರೆ, 1 ಮೋಲ್ = (  ಗ್ರಾಮೆಂದಾಗುತ್ತದೆ.  ಉದಾಹರಣೆಗೆ 1 ಮೋಲ್ ಹೈಡ್ರೋಜನ್ ಅಣುಗಳು 2 ಗ್ರಾಮಗಳಷ್ಟು ರಾಶಿ ಹೊಂದಿರುತ್ತವೆ; 1 ಮೋಲ್ ಆಕ್ಸಿಜನ್ ಅಣುಗಳು (ಸಾಪೇಕ್ಷ ಅಣವಿಕರಾಶಿ 32) 32 ಗ್ರಾಮಗಳಷ್ಟು ರಾಶಿ ಹೊಂದಿರುತ್ತವೆ; ಇತ್ಯಾದಿ.

	ಬೇರೆ ಬೇರೆ ಧಾತುಗಳ ಇಲ್ಲವೆ ಸಂಯುಕ್ತಗಳ ಮೋಲ್‍ಗಳು ಒಂದೇ ಸಂಖ್ಯೆಯ ಅಣುಗಳನ್ನು ಹೊಂದಿರುವುದರಿಂದ ಆದರ್ಶ ಅನಿಲಗಳ (ಐಡಿಯಲ್ ಗ್ಯಾಸಸ್) ಮೋಲುಗಳು ಒಂದೇ ಉಷ್ಣತೆ ಮತ್ತು ಸಂಮರ್ದಗಳಲ್ಲಿ ಒಂದೇ ಗಾತ್ರವನ್ನು ಆಕ್ರಮಿಸುತ್ತವೆ.  0(ಅ ಉಷ್ಣತೆ ಮತ್ತು 1 ವಾಯುಮಂಡಲ (ಅಂದರೆ 101. 325 ಪ್ಯಾಸ್ಕಲ್ಲುಗಳು) ಸಂಮರ್ದದ ಸಂದರ್ಭದಲ್ಲಿ ಈ ಗಾತ್ರ (ಇದನ್ನೇ ಮೋಲಾರ್ ಗಾತ್ರ - ಮೋಲಾರ್ ವಾಲ್ಯೂಮ್ ಎಂದು ಕರೆಯುವುದು) 22.4 ಲೀಟರುಗಳಿಗೆ ಸಮ.
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ